Posts

Showing posts from January, 2020

ಲಯನ್ ಜಯರಾಜ್ ನಾಯ್ಡು ಕಪ್ಪನಹಳ್ಳಿ

Image
ಕೃಪೆ ... ಸುನಿಲ್ ಹೆಗ್ಡೆ ಮುಂಬಯಿ ಮೊಸರಲ್ಲಿ ಕಲ್ಲು ಹುಡುಕುವ ಕೆಲವು ಕಟ್ಟಾ ಅಭಿಮಾನಿಗಳೇ ಈ ಕಥೆಯನ್ನು ಓದಿ ಅರ್ಥೈಸಿಕೊಳ್ಳಿ ಲಯನ್ ಜಯರಾಜ್ ನಾಯ್ಡು ಅವರನ್ನು ನಿದಿಸುವ ಮುಂಚೆ ಒಮ್ಮೆ ಯೋಚಿಸಿ . ಮಾಡಿದ ಪಾಪದ ಫಲ ಬೇರೆಲ್ಲೂ  ಸಿಗುವುದಿಲ್ಲ ಇಲ್ಲಿ ಸಿಗುವುದು ನೆನಪಿಡಿ *ಅನ್ನದಾನದ ಮಹಿಮೆ* ಸತ್ಯಜಿತ್‌ ಎಂಬ ಬ್ರಾಹ್ಮಣ.ಸದಾಚಾರ ಸಂಪನ್ನ.ಗಂಗಾನದಿಯ ಭಕ್ತ. *ಎಲ್ಲಿ ಯಾವ ತೀರ್ಥ ಕ್ಷೇತ್ರ ಹೋದರು ಯಾವ ನದಿಗಳು ಕಂಡರು ಗಂಗಾ ದೇವಿಯ ಸ್ಮರಣೆ.ನಿತ್ಯ ತೀರ್ಥ ಯಾತ್ರೆ ನಿರತ.* ಗಂಗಾ ಸ್ನಾನ ಮಾಡಬೇಕು ಎಂಬುವ ಹಂಬಲ.ಅದಕ್ಕೆ ಹೊರಟ. ಕುರುಕ್ಷೇತ್ರ ವೆನ್ನುವ ಊರಿಗೆ ಬರುತ್ತಾನೆ. ದಣಿದ ಆತನಿಗೆ ಯಾರಾದರೂ ಬ್ರಾಹ್ಮಣ ಕುಟುಂಬ ಯಾತ್ರಿಕರಿಗೆ ಊಟ ಹಾಕುವ ಕುಟುಂಬದ ಬಗ್ಗೆ ಅಲ್ಲಿ ಇದ್ದ ಜನರಿಗೆ ಕೇಳಿದ. ಆ ಗ್ರಾಮದ ಜನರು *ಸತ್ಯಕೇತು ಎನ್ನುವ ಬ್ರಾಹ್ಮಣ* ನಿತ್ಯ ಅನ್ನದಾನ ಮಾಡುತ್ತಾ ಇದ್ದಾನೆ.ಅವನಲ್ಲಿ ನೀವು ಹೋಗಿ ನಿಮ್ಮ ಹಸಿವಿನ ಭಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಅಂತ ಹೇಳುತ್ತಾರೆ. ತಕ್ಷಣ ಅವನ ಮನೆಗೆ ಬರುತ್ತಾನೆ. ಬಂದಂತಹ ಅತಿಥಿ ಯನ್ನು ನೋಡಿ ಸತ್ಯಕೇತು ಬಹು ಸಂತಸಗೊಂಡು *"ನಿಮ್ಮಂತಹ ಮಹಾತ್ಮರ, ಭಗವಂತನ ಭಕ್ತರ ,ಆಗಮನ ನನ್ನ ಜನ್ಮಾಂತರದ ಪುಣ್ಯ ದ ಫಲ.ನಮ್ಮಪಿತೃದೇವತೆಗಳು*, ಇಂದು ಸಂತೃಪ್ತಿ ಹೊಂದುವರು*. *ಅವರ ಅಂತರ್ಯಾಮಿಯಾದ ಶ್ರೀ ಹರಿಯು ಸಂಪ್ರಸನ್ನ ಆಗುವನು*. ಏಳಿ.!!.ತಮ್ಮ ಸ್ನಾನ ಆಹ್ನೀಕ ಗಳನ್ನು ಮುಗಿಸ...

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಲಯನ್ ಜಯರಾಜ್ ನಾಯ್ಡು

Image
 ಸಮೃದ್ಧಿ - ಸಡಗರ - ಸಂಭ್ರಮದ ಸಂಕ್ರಾಂತಿ.... ನಾಡಿನ ಸಮಸ್ತ ಜನತೆಗೆ ಸಮೃದ್ಧಿಯ ಸಂಕೇತವಾದ, ರೈತರ ಬದುಕಿನ ವಿಶೇಷ ಹಬ್ಬ , ಜೊತೆಗೆ ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರವಾದ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಮುಂಬರುವ ದಿನಗಳಲ್ಲಿ ನಾಡಿನೆಲ್ಲೆಡೆ ಸುಖ - ಶಾಂತಿ - ಸಮೃದ್ಧಿ ಸದಾ ನೆಲೆಸಿರಲಿ, ಎಲ್ಲರ ಬಾಳಿನಲ್ಲೂ ನೆಮ್ಮದಿ ಇರಲಿ, ಬಾಳು ಬಂಗಾರವಾಗಲಿ ಎಂದು ಹಾರೈಸುತ್ತೇನೆ. ಇಂದು ಅತ್ಯಂತ ಶ್ರದ್ಧೆಯ ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ವಿಶ್ವದಾದ್ಯಂತ ಹೆಚ್ಚಿನ ಪ್ರಾಧಾನ್ಯತೆ ಇದೆ. ಸಂಕ್ರಾಂತಿ ಸೂರ್ಯ ಆರಾಧನೆಯ ಹಬ್ಬವೂ ಆಗಿದೆ. ಇದನ್ನು ಪೊಂಗಲ್ ಎಂದೂ  ಕರೆಯುತ್ತಾರೆ  ರೈತರಿಗೆ ಸುಗ್ಗಿ ಹಬ್ಬವಾದ ಈ ದಿನ ತನ್ನ ಜೀವನದ ಆಧಾರವಾದ ಎತ್ತುಗಳನ್ನು  ಸಿಂಗರಿಸುವುದು, ಬಂಡಿಗಳನ್ನು ಕಟ್ಟಿ ಓಡಿಸುವುದು, ಮಹಿಳೆಯರು ಗುಂಪು ಗುಂಪಾಗಿ ರಂಗೋಲಿ ಬಿಡಿಸುವುದು, ಯುವಕರು ರಂಗು ರಂಗಿನ ಗಾಳಿಪಟಗಳನ್ನು ಹಾರಿಸುವುದು, ಮನೆಗಳಲ್ಲಿ ವಿಶಿಷ್ಟವಾದ ಸಿಹಿ ತಿಂಡಿ ತಿನಿಸುಗಳನ್ನು ಮಾಡುವುದು ಈ ಹಬ್ಬದ ವಿಶೇಷವಾಗಿದೆ. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ, ಎಳ್ಳು ಬೆಲ್ಲವನ್ನು ತೆಗೆದುಕೊಂಡು ಒಳ್ಳೆಯದನ್ನು ಮಾತನಾಡೋಣ ಎಂದು ಸಮಸ್ತ ನಾಡಿನ ಜನತೆಗೆ ಅತ್ಯಂತ ತುಂಬು ಹೃದಯದಿಂದ ಶುಭ  ಹಾರೈಸುತ್ತೇನೆ.. ಲಯನ್ ಜಯರಾಜ್ ನಾಯ್ಡು

ತಮಿಳುನಾಡಿನ ಪೋಲಿಸರಿಗೆ ಕನ್ನಡ ಪರ ಹೋರಾಟಗಾರ ಕಪ್ಪನಹಳ್ಳಿ ಲಯನ್ ಜಯರಾಜ್ ನಾಯ್ಡು ಓಪನ್ ಚಾಲೆಂಜ್ Lion Jayaraj Naidu

Image
ಇದು ಇದು ಬೇಕಾಗಿದ್ದು...!!!@#$ ಬನ್ನಿ ತಮಿಳುನಾಡು ಪೋಲೀಸವರೇ ಇವಾಗ ತಡಿರಿ.ಅದು ಎಷ್ಟು ಗಾಡಿಗಳನ್ನ ಹಾಗೇ ಕರ್ನಾಟಕ ಧ್ವಜನಾ ತೆಗಸತ್ತಿರೋ ಬನ್ನಿ ತೆಗಸಿ ಇವಾಗ.ಒಂದಲ್ಲಾ ಎರಡಲ್ಲಾ ಬರೋಬ್ಬರಿ ನೂರಕ್ಕೂ ಹೆಚ್ಚು ಗಾಡಿಗಳು ಬೆಂಗಳೂರು ಇಂದ ತಮಿಳುನಾಡಿಗೆ ಜೊತೆಯಲ್ಲಿ ಧ್ವಜ ಕಟ್ಟಕೊಂಡು ಬರತ್ತಿದ್ದೇ.....ಇದು ಕರ್ನಾಟಕ .ಕನ್ನಡಿಗರ ಗತ್ತು ಅಂದರೆ❤️❤️❤️. ''ಕೆಚ್ಚೆದೆಯ ಕನ್ನಡಿಗರೇ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ'' ತಮಿಳುನಾಡಿನ ಪೋಲಿಸರಿಗೆ ಕನ್ನಡ ಪರ ಹೋರಾಟಗಾರ‌ ಲಯನ್ ಜಯರಾಜ್ ನಾಯ್ಡು ಕಪ್ಪನಹಳ್ಳಿ ಅವರ ಓಪನ್ ಚಾಲೆಂಜ್