ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಲಯನ್ ಜಯರಾಜ್ ನಾಯ್ಡು
ನಾಡಿನ ಸಮಸ್ತ ಜನತೆಗೆ ಸಮೃದ್ಧಿಯ ಸಂಕೇತವಾದ, ರೈತರ ಬದುಕಿನ ವಿಶೇಷ ಹಬ್ಬ , ಜೊತೆಗೆ ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರವಾದ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ಮುಂಬರುವ ದಿನಗಳಲ್ಲಿ ನಾಡಿನೆಲ್ಲೆಡೆ ಸುಖ - ಶಾಂತಿ - ಸಮೃದ್ಧಿ ಸದಾ ನೆಲೆಸಿರಲಿ, ಎಲ್ಲರ ಬಾಳಿನಲ್ಲೂ ನೆಮ್ಮದಿ ಇರಲಿ, ಬಾಳು ಬಂಗಾರವಾಗಲಿ ಎಂದು ಹಾರೈಸುತ್ತೇನೆ.
ಇಂದು ಅತ್ಯಂತ ಶ್ರದ್ಧೆಯ ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ವಿಶ್ವದಾದ್ಯಂತ ಹೆಚ್ಚಿನ ಪ್ರಾಧಾನ್ಯತೆ ಇದೆ. ಸಂಕ್ರಾಂತಿ ಸೂರ್ಯ ಆರಾಧನೆಯ ಹಬ್ಬವೂ ಆಗಿದೆ. ಇದನ್ನು ಪೊಂಗಲ್ ಎಂದೂ ಕರೆಯುತ್ತಾರೆ
ರೈತರಿಗೆ ಸುಗ್ಗಿ ಹಬ್ಬವಾದ ಈ ದಿನ ತನ್ನ ಜೀವನದ ಆಧಾರವಾದ ಎತ್ತುಗಳನ್ನು ಸಿಂಗರಿಸುವುದು, ಬಂಡಿಗಳನ್ನು ಕಟ್ಟಿ ಓಡಿಸುವುದು, ಮಹಿಳೆಯರು ಗುಂಪು ಗುಂಪಾಗಿ ರಂಗೋಲಿ ಬಿಡಿಸುವುದು, ಯುವಕರು ರಂಗು ರಂಗಿನ ಗಾಳಿಪಟಗಳನ್ನು ಹಾರಿಸುವುದು, ಮನೆಗಳಲ್ಲಿ ವಿಶಿಷ್ಟವಾದ ಸಿಹಿ ತಿಂಡಿ ತಿನಿಸುಗಳನ್ನು ಮಾಡುವುದು ಈ ಹಬ್ಬದ ವಿಶೇಷವಾಗಿದೆ.
ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ, ಎಳ್ಳು ಬೆಲ್ಲವನ್ನು ತೆಗೆದುಕೊಂಡು ಒಳ್ಳೆಯದನ್ನು ಮಾತನಾಡೋಣ ಎಂದು ಸಮಸ್ತ ನಾಡಿನ ಜನತೆಗೆ ಅತ್ಯಂತ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ..
ಲಯನ್ ಜಯರಾಜ್ ನಾಯ್ಡು
Comments
Post a Comment