Posts
Showing posts from August, 2021
ಆಸರೆ ಫೌಂಡೇಶನ್ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು
- Get link
- X
- Other Apps
"ಕ್ರಾಂತಿವೀರ" ಸಂಗೊಳ್ಳಿ ರಾಯಣ್ಣನ ಜನ್ಮದಿನದ ಹಾರ್ದಿಕ ಶುಭಾಶಯಗಳು..ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ದೇಶಭಕ್ತ . ಇವರ ಇತಿಹಾಸ ಕೇಳಿದರೆ, ನಮ್ಮ ನರ ನಾಡಿಗಳಲ್ಲಿ ದೇಶ ಭಕ್ತಿಯ ರಕ್ತ ಪುಟಿದೇಳುತ್ತದೆ. ಬ್ರಿಟಿಷರನ್ನು ಮೆಟ್ಟಿ ನಿಂತ, ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನ, ಕಿತ್ತೂರು ಸಂಸ್ಥಾನದ ಸೇನೆಯ ಸೇನಾಧಿಪತಿಯಾದ ಕೆಚ್ಚೆದೆಯ ವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನವಿಂದು..ಕಿತ್ತೂರು ಸಂಸ್ಥಾನದ ಮೇಲೆ ಆಕ್ರಮಣ ಮಾಡಿದ ಬ್ರಿಟಿಷರ ವಿರುದ್ಧ ಹೋರಾಡಿ ದೇಶದ , ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊಟ್ಟ ಮೊದಲು ಅಡಿಪಾಯ ಹಾಕಿದ ಮಹಾನ್ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ ರಂದು. ಮುಂದೆ ಇಂತಹಾ ಮಹಾನ್ ದೇಶಭಕ್ತ ಹಾಗೂ ವೀರಪುರುಷನ ಜನ್ಮ ದಿನದಂದೆ ನಮ್ಮ ದೇಶಕ್ಕೆ ಬ್ರಿಟಿಷ್ ರಿಂದ ಸ್ವಾತಂತ್ರ್ಯ ದೊರೆಯುತ್ತದೆ . ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ..ಸಂಗೊಳ್ಳಿ ರಾಯಣ್ಣ ತನ್ನ ಜೀವಮಾನದ ತುಂಬ ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಮಾಡಿದ ಹೋರಾಟಗಳ ಇತಿಹಾಸ ನಮ್ಮಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚುತ್ತದೆ. ತನ್ನ ಜೀವನದ ಮೂವತೈದು ವರ್ಷಗಳ ಕಾಲ ತನ್ನ ಸರ್ವಸ್ವವನ್ನು ಕಿತ್ತೂರು ನಾಡಿನ ಸ್ವಾತಂತ್ರ್ಯಕ್ಕಾಗಿ ಅರ್ಪಿಸಿದ ಮಹಾನ್ ವೀರ ಯೋಧನನ್ನು ನೆನೆಯುತ್ತಾ, ತಮ್ಮೆಲ್ಲರಿಗೂ ಮತ್ತೊಮ್ಮೆ "ಕ್ರಾಂತಿವೀರ" ಸಂಗೊಳ್ಳಿ ರಾಯಣ್ಣನ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.. ಗೌರವಗಳೊಂದಿಗೆ
- Get link
- X
- Other Apps