ತಾಯಿ ಎಂದರೆ ಅದೊಂದು ದೇವರಷ್ಟೇ... ಸಮಾನರಾದ ಸಂಬಂದ. ಆ ಬಚ್ಚಿದ ಮೊಲೆಗಳಲ್ಲೂ... ತನ್ನ ಪಾಲಿನ ಹಾಲನ್ನು ಹುಡುಕುತ್ತಿರುವ ಆ ಮಗವಿನ ಕಣ್ಣಲ್ಲಿ ಕಾಣುವ ಹಸಿವು ಅದರ ಜೊತೆಗೆ ಆ ಅಮ್ರತ ಕಲಶಗಳು ತನ್ನ ಹಸಿವು ನೀಗಿಸುವುದೆಂಬ ಭರವಸೆಯ ಬೆಳಕು

ಹೊಟ್ಟೆ ತುಂಬಿರುವ ಜನರಿಗೆ ಇದರರ್ಥ ತಿಳಿಯುವುದು ಕಷ್ಟ ಆದರೆ ಆ ಮಗುವಿನ ಕಣ್ಣಿನ ಆಳಕ್ಕೆ ಇಳಿದು ಒಮ್ಮೆ ನಮ್ಮನ್ನು ನಾವು ವಿಮರ್ಶಿಸಿಕೊಂಡರೆ ಎಷ್ಟು ಹೊಟ್ಟೆಯ ಹಸಿವನ್ನು ನಾವು ನೀಗಿದ್ದೇವೆ ಎಂಬ ಪುಟ್ಟ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಏನು ಉತ್ತರ ಸಿಗಬಹುದು...?

ಎಷ್ಟೋ ಬಾರಿ ಹೊರಗಡೆ ಆಹಾರ ತಿಂದು ಮಿಕ್ಕಿದ್ದನ್ನು ತಟ್ಟೆಯಲ್ಲಿ ಬಿಟ್ಟು ಬರುತ್ತೇವೆ ಕೇಳಿದರೆ ಪಾರ್ಟಿ ಮ್ಯಾನರ್ಸ್ ಅನ್ನೋ... ರೆಡಿಮೇಡ್ ಉತ್ತರ ಸಿಗುತ್ತದೆ. ಅದೇ ಆಹಾರವು ನಂತರ ಯಾವುದೋ... ಮೋರಿಯ ಪಾಲಾಗುವುದು ದೂರದಲ್ಲಿ ಆ ಆಹಾರಗಳನ್ನು ಆಸೆಯಿಂದ ನೋಡಿ ಆದರೆ ತಿನ್ನಲಾಗದೇ... ಅಸಾಹಯಕತೆ ಬೀರುವ ಕಣ್ಣುಗಳನ್ನು ಒಮ್ಮೆ ನೋಡಿ..

ಮನೆಯಲ್ಲಿ ಮಾಡುವ ಆಹಾರ ತಮಗೆ ಸೇರುವುದಿಲ್ಲ ಎಂದು ಅರ್ದಂಬರ್ದ ಉಂಡು ತಟ್ಟೆಯನ್ನು ದೂಡುವ ವ್ಯಕ್ತಿಗಳಿಗೇನು ನಮ್ಮಲ್ಲಿ ಕೊರತೆ ಇಲ್ಲ ಒಮ್ಮೆ ಆ ತಟ್ಟೆಯಲ್ಲಿ ಇರುವ ಆಹಾರದ ಹಿಂದಿರುವ ಪರಿಶ್ರಮ ವನ್ನು ಯೋಚುಸುವ ಕೊಂಚ ಸಮಯ ಇದೆಯಾ ನಮ್ಮಲ್ಲಿ

ಸ್ನೇಹಿತರೇ... ಈ‌ ಲೇಖನ ಕೇವಲ ಅಕ್ಷರಗಳಾಗಿ ನೋಡದೇ... ಕೊಂಚ ಓದಿ ನಿಮ್ಮನ್ನು ನೀವು ವಿಮರ್ಶಿಸಿ ಇದಕ್ಕೆ ಲೈಕ್ ಕಮೆಂಟ್ ಬೇಕಾಗಿಲ್ಲ. ಇದರಿಂದ ನೀವು ತಿಂಗಳಿಗೆ ಹತ್ತು ಹಸಿದ ಹೊಟ್ಟೆಯನ್ನು ತ್ರಪ್ತಿಗೊಳಿಸಿದರೆ ಅದೇ ನನ್ನ ಈ ಲೇಖನಕ್ಕೆ ಕೊಡುವ ಗೌರವ ಪ್ರೀತಿ

✒.ಲಯನ್ ಜಯರಾಜ್ ನಾಯ್ಡು

Comments