ಏನಾದರೂ ಬಿಡಬಲ್ಲೆ
ಕನ್ನಡವ ಬಿಡಲೊಲ್ಲೆ
ಉಸಿರಿಲ್ಲದೆ ಒಡಲಿಲ್ಲ
ಕನ್ನಡವಿಲ್ಲದೆ ನಾನಿಲ್ಲ

ಒಡಲಿನಿಂದ ಉಸಿರು
ಹೋದರೂ ಸರಿ
ಕನ್ನಡದ ಹೆಸರು
ಉಳಿಸುವುದೇ ಸರಿ

ರಕ್ತದ ಕಣಕಣದಿ
ಕನ್ನಡ ತುಂಬಿದೆ
ಅನ್ಯ ಯೋಚನೆಗೆ
ದಾರಿ ಎಲ್ಲಿದೆ

ಕನ್ನಡ ಸರಸ್ವತಿಯೇ
ನಿನ್ನ ಸಾಕ್ಶಿಯಾಗಿ ಹೇಳುವೆ
ನನ್ನ ಸರ‍್ವಸ್ವವನ್ನೇ
ಕನ್ನಡಕ್ಕಾಗಿ ದಾರೆಯೆರೆವೆ

Comments